<ಗದುಗಿನ ಭಾರತ ಪದಕೋಶ
ವ,
 1.		ವಂಕ, ಭಾಗ, ಗದಾ ಪರ್ವ,4,18, ,
 2.		ವಂಕಿ, ಮೀನು ಹಿಡಿಯುವ ಗಾಳ, ಆದಿ ಪರ್ವ,8,76
 3.		ವಂಗಡ, ಬೇರೆÀ, ಶಲ್ಯ ಪರ್ವ,3,51
 4.		ವಂಗಡ, ಪಕ್ಷ, ದ್ರೋಣ ಪರ್ವ,15,31
 5.		ವಂಗಡ, ಗುಂಪು., ಶಲ್ಯ ಪರ್ವ,3,7
 6.		ವಂಗರ ಮುರಿದು, ವಂಗರನ್ನು ಸೋಲಿಸಿ, ಸಭಾ ಪರ್ವ,3,27
 7.		ವಂಚಿಸು, ಮೋಸಗೊಳಿಸು, ಗದಾ ಪರ್ವ,6,21
 8.		ವಂದಿ, ಸ್ತುತಿಪಾಠಕ, ಆದಿ ಪರ್ವ,7,17
 9.		ವಂದಿ, ಸ್ತುತಿಪಾಠಕರು, ಆದಿ ಪರ್ವ,15,29
 10.		ವಂದಿ, ಹೊಗಳುಭಟ್ಟರು (ಈ ಪದಗಳ ವಿವರಣೆಗೆ ಇದೇ ಪರ್ವದ 8ನೆಯ ಸಂಧಿಯ 42ನೆಂi, ಗದಾ ಪರ್ವ,9,41
 11.		ವಂದಿಜನ ಜಲಧಿ, ಹೊಗಳುಭಟ್ಟರೆಂಬ ಸಮುದ್ರದಷ್ಟು ದೊಡ್ಡ ಸಂಖ್ಯೆಯ ಜನ, ಶಲ್ಯ ಪರ್ವ,3,30
 12.		ವಂದ್ಯ, ಗೌರವಾರ್ಹನಾದ, ಆದಿ ಪರ್ವ,18,22
 13.		ವಕ್ತ, ವಾಗ್ಮಿ, ಉದ್ಯೋಗ ಪರ್ವ,4,45
 14.		ವಕ್ತ್ರ್, ಬಾಯಿ, ಉದ್ಯೋಗ ಪರ್ವ,3,13
 15.		ವಕ್ಷಸ್ಥಳ, ಎದೆಯ ಪ್ರದೇಶ, ಉದ್ಯೋಗ ಪರ್ವ,4,62
 16.		ವಚನವಿನ್ಯಾಸ, ಮಾತಿನ ರಚನೆ, ಆದಿ ಪರ್ವ,17,14
 17.		ವಚನವಿರಾಗ, ಮಾತಿನ ವೈರಾಗ್ಯ, ಗದಾ ಪರ್ವ,8,62
 18.		ವಚನಾನುರಾಗ, ಪ್ರೀತಿಯ ಮಾತುಗಳು, ಆದಿ ಪರ್ವ,6,33
 19.		ವಚೋನಿಧಿ, ಸತ್ಯವಾದಿ, ದ್ರೋಣ ಪರ್ವ,18,62
 20.		ವಚೋವಿನ್ಯಾಸ, ಮಾತಿನಧಾಟಿ , ಗದಾ ಪರ್ವ,11,52, , 
 21.		ವಚೋವಿಸ್ತರ, ವಿವರವಾಗಿ ಹೇಳುವಿಕೆ, ಆದಿ ಪರ್ವ,18,23
 22.		ವಜ್ರಕವಚ, ಭೇದಿಸಲಾಗದ ಕವಚ, ಗದಾ ಪರ್ವ,5,52
 23.		ವಜ್ರದ ಜೋಡು, ವಜ್ರಕವಚ., ಭೀಷ್ಮ ಪರ್ವ,7,19
 24.		ವಜ್ರಪಂಜರ, ಸರ್ವತೋಭದ್ರ ರಕ್ಷಣೆ, ಭೀಷ್ಮ ಪರ್ವ,1,53
 25.		ವಜ್ರಭಿತ್ತಿಗಳ, ವಜ್ರಖಚಿತವಾದ ಗೋಡೆಗಳ, ಸಭಾ ಪರ್ವ,5,29
 26.		ವಜ್ರಾಂಗಿ, ವಜ್ರ ಕವಚ, ಕರ್ಣ ಪರ್ವ,16,4
 27.		ವಜ್ರಾಂಗಿ, ವಜ್ರದಷ್ಟು ಕಠಿಣವಾದ ಲೋಹದ ಕವಚ, ಗದಾ ಪರ್ವ,5,41
 28.		ವಜ್ರಾಂಗಿ, ಅಭೇದ್ಯ ಕವಚ., ಭೀಷ್ಮ ಪರ್ವ,9,40
 29.		ವಜ್ರಾಯತ, ವಜ್ರಕಠಿಣವಾದ, ಗದಾ ಪರ್ವ,11,39
 30.		ವಜ್ರಾಯುಧ, ಇಂದ್ರ, ದ್ರೋಣ ಪರ್ವ,5,24
 31.		ವಜ್ರಿಸುತ, ವಜ್ರಾಯಧಧಾರಿ ಇಂದ್ರನ ಮಗ ಅರ್ಜುನ, ಭೀಷ್ಮ ಪರ್ವ,3,25
 32.		ವಟ, ಆಲ, ಆದಿ ಪರ್ವ,20,48
 33.		ವಟಕುಜ, ವಟವೃಕ್ಷ, ವಿರಾಟ ಪರ್ವ,1,2
 34.		ವಟಪತ್ರ, ಆಲದ ಮರ, ಅರಣ್ಯ ಪರ್ವ,14,26
 35.		ವಟ್ಟಿ, ಪಟ್ಟಿ, ಗದಾ ಪರ್ವ,7,22
 36.		ವಡಬ, ಪ್ರಳಯಕಾಲದಲ್ಲಿ ಸಮುದ್ರದಲ್ಲಿ ಉದ್ಭವಿಸುವ ಕಿಚ್ಚು, ಗದಾ ಪರ್ವ,2,32
 37.		ವಡಬ, ಬಡಬಾನಲ (ಸಮುದ್ರದ ಬೆಂಕಿ), ಭೀಷ್ಮ ಪರ್ವ,3,23
 38.		ವಡಬಗೆ, ಬಡಬಾಗ್ನಿಗೆ, ದ್ರೋಣ ಪರ್ವ,6,19
 39.		ವಡಬಾನಲ, ಪ್ರಳಯಕಾಲದ ಅಗ್ನಿ, ಗದಾ ಪರ್ವ,5,34
 40.		ವಡಮುಖ, ಉತ್ತರ ದಿಕ್ಕಿನ ಕಡೆಗೆ ಮುಖ, ವಿರಾಟ ಪರ್ವ,8,49
 41.		ವಡ್ಡಂತಿ, < ವರ್ಧಂತಿ ಹುಟ್ಟಿದ ಹಬ್ಬ, ವಿರಾಟ ಪರ್ವ,7,13
 42.		ವಣಿಜ, ವಾಣಿಜ್ಯ, ಗದಾ ಪರ್ವ,11,16
 43.		ವದನ, ಮೋರೆ/ಮುಖ, ಉದ್ಯೋಗ ಪರ್ವ,9,15
 44.		ವದನಾಂಜಳಿಪುಟದ ತಾಡನ, ಎರಡೂ ಕೈಗಳಿಂದ ಹಣೆಯನ್ನು ಹೊಡೆz, ಗದಾ ಪರ್ವ,10,12
 45.		ವದಾನ್ಯ, ದಾನಶೀಲ, ಸಭಾ ಪರ್ವ,1,29
 46.		ವದಾನ್ಯಭಟ್ಟನು, ಮಾತುಗಾರ, ಸಭಾ ಪರ್ವ,8,24
 47.		ವಧುಗಳು, ಹೆಂಡತಿಯರು, ಗದಾ ಪರ್ವ,12,10
 48.		ವಧ್ಯರು, ಕೊಲೆಯಾಗಲು ಅರ್ಹರು, ಗದಾ ಪರ್ವ,5,6
 49.		ವನಕಳಭ, ಕಾಡಿನಾನೆಮರಿ, ಭೀಷ್ಮ ಪರ್ವ,8,32
 50.		ವನಗತಿಕ, ಅರಣ್ಯಕ್ಕೆ ಹೋಗುವ, ಗದಾ ಪರ್ವ,11,24
 51.		ವನಜಮುಖಿ, ತಾವರೆಯ ಮುಖದವಳು, ವಿರಾಟ ಪರ್ವ,3,83
 52.		ವನದಾವ, ಕಾಡುಕಿಚ್ಚು, ಉದ್ಯೋಗ ಪರ್ವ,8,52
 53.		ವನವಳಯ, ಕಾಡಿನ ಪ್ರದೇಶ, ಸಭಾ ಪರ್ವ,1,63
 54.		ವನವಾಸಾಯತ, ದೀರ್ಘವಾದ ಅರಣ್ಯವಾಸದ ಅವಧಿ, ವಿರಾಟ ಪರ್ವ,1,168
 55.		ವನಸಂಕುಲ, ವನಸಮೂಹ, ಉದ್ಯೋಗ ಪರ್ವ,4,115
 56.		ವನಸಿರಿ, ವನಲಕ್ಷ್ಮಿ, ಆದಿ ಪರ್ವ,20,50
 57.		ವನಾಂತರ, ಅರಣ್ಯದ ನಡುವಿನ ಭಾಗ, ಆದಿ ಪರ್ವ,8,0
 58.		ವನಾಲಯ, ಕಾಡಿನ ಮನೆ, ವಿರಾಟ ಪರ್ವ,1,225
 59.		ವನಿತೆ, ಹೆಂಗಸು, ಆದಿ ಪರ್ವ,16,7
 60.		ವರ, ಅಭೀಷ್ಟ, ಆದಿ ಪರ್ವ,2,4
 61.		ವರಣ, ವರಿಸುವುದು, ವಿರಾಟ ಪರ್ವ,10,76
 62.		ವರಮಹೀಸುರವರ್ಗ, ಶ್ರೇಷ್ಠ ಬ್ರಾಹ್ಮಣ ವರ್ಗ, ಭೀಷ್ಮ ಪರ್ವ,8,8
 63.		ವರಲೆ, ಹೆಣ್ಣು ಹಂಸ ಪಕ್ಷಿ, ಆದಿ ಪರ್ವ,20,53
 64.		ವರಾಂಗನೆ, ಶ್ರೇಷ್ಠಸ್ತ್ರೀ, ಆದಿ ಪರ್ವ,18,28
 65.		ವರಾರ್ಧ ತನುಯುತೆ, ಅರ್ಧಶರೀರದಲ್ಲಿ ನೆಲೆ ನಿಂತವಳು, ವಿರಾಟ ಪರ್ವ,1,11
 66.		ವರಾಸನ, ಶ್ರೇಷ್ಠವಾದ ಆಸನ, ಆದಿ ಪರ್ವ,14,26
 67.		ವರಿಸು, ಅಪೇಕ್ಷಿಸು, ಆದಿ ಪರ್ವ,20,14
 68.		ವರಿಸು, ಇಷ್ಟಪಡು, ಗದಾ ಪರ್ವ,5,48
 69.		ವರುಣ, ಪಶ್ಚಿಮ ದಿಕ್ಕಿನ ಒಡೆಯ, ದ್ರೋಣ ಪರ್ವ,10,14
 70.		ವರುಷತತಿ, ವರುಷಗಳ ಗುಂಪು, ವಿರಾಟ ಪರ್ವ,4,23
 71.		ವರೂಥ, ರಥ. ತ್ರಿವೇಣುಕ, ಕರ್ಣ ಪರ್ವ,7,4
 72.		ವರ್ಜಿಸು, ತ್ಯಜಿಸು, ಆದಿ ಪರ್ವ,8,43
 73.		ವರ್ಜಿಸು, ತೊರೆ, ಉದ್ಯೋಗ ಪರ್ವ,4,47
 74.		ವರ್ತಿಸಿತು, ನಡೆಯಿತು, ಗದಾ ಪರ್ವ,4,29
 75.		ವರ್ಧನ, ಬೆಳಸು, ಆದಿ ಪರ್ವ,16,24
 76.		ಮರ್ಮ, ರಹಸ್ಯ, ಅರಣ್ಯ ಪರ್ವ,2,26
 77.		ವರ್ಷಾಕಾಲ, ಮಳೆಗಾಲ, ಆದಿ ಪರ್ವ,19,22
 78.		ವಲಯ, ಬಳೆ, ಕರ್ಣ ಪರ್ವ,7,22
 79.		ವಲಯ, ಅವರಣ, ಆದಿ ಪರ್ವ,12,4
 80.		ವಲ್ಮೀಕ, ಹಾವಿನ ಹುತ್ತ, ಗದಾ ಪರ್ವ,5,28
 81.		ವಲ್ಲಭ, ಗಂಡ, ಆದಿ ಪರ್ವ,9,16
 82.		ವಲ್ಲಭರು, ಪತಿಗಳು, ವಿರಾಟ ಪರ್ವ,2,14
 83.		ವಲ್ಲಭೆ, ಹೆಂಡತಿ, ಆದಿ ಪರ್ವ,9,24
 84.		ವಶ್ಯ, ಆಕರ್ಷಿಸುವ, ಆದಿ ಪರ್ವ,13,2
 85.		ವಸತಿ, ವಾಸಿಸುವಸ್ಥಳ , ಗದಾ ಪರ್ವ,5,24
 86.		ವಸುಧಾಂಗನೆ, ಭೂಮಿಯೆಂಬ ಹೆಣ್ಣು (ಬೆಲೆವೆಣ್ಣು ಎಂದು ಭೂಮಿಯನ್ನು ಹೀಯಾಳಿಸುವ ಅರ್ಥದಲ್ಲಿ), ಗದಾ ಪರ್ವ,1,66
 87.		ವಸುಧೆ, ಭೂಮಿ, ವಿರಾಟ ಪರ್ವ,10,67
 88.		ವಸುಧೆ, ಭೂಮಿ/ನೆಲ, ಉದ್ಯೋಗ ಪರ್ವ,4,111
 89.		ವಸುಮತೀವಧುಗೆ, ಭೂಮಿಯೆಂಬ (ರಾಜ್ಯವೆಂಬ) ಕನ್ಯೆಗೆ, ಸಭಾ ಪರ್ವ,1,27
 90.		ವಸ್ತೂತ್ಕರ, ಪದಾರ್ಥಗಳ ರಾಶಿ, ಆದಿ ಪರ್ವ,10,18
 91.		ವಸ್ತ್ರಾಕರುಷಣ, ಸೀರೆಯನ್ನು ಸೆಳೆಯುವಿಕೆ, ವಿರಾಟ ಪರ್ವ,3,5
 92.		ವಹಿ, ಲೆಕ್ಕ, ಕರ್ಣ ಪರ್ವ,14,28
 93.		ವಹಿಲ, ಶೀಘ್ರವಾಗಿ, ಗದಾ ಪರ್ವ,4,26
 94.		ವಹಿಲದಲ್ಲಿ, ಅತಿವೇಗದಲ್ಲಿ, ಭೀಷ್ಮ ಪರ್ವ,9,44
 95.		ವಹ್ನಿ ಸೂಕ್ತ, ಅಗ್ನಿ ಸ್ತೋತ್ರ, ಆದಿ ಪರ್ವ,20,66
 96.		ವಹ್ನಿಯ, ಬೆಂಕಿಯ, ದ್ರೋಣ ಪರ್ವ,6,26
 97.		ವಳಯ, ಸುತ್ತು, ದ್ರೋಣ ಪರ್ವ,9,21
 98.		ವಳಯ, ವರ್ತುಲಾಕಾರ, ಆದಿ ಪರ್ವ,12,17
 99.		ವಳಿತ, ಪ್ರದೇಶ, ವಿರಾಟ ಪರ್ವ,6,26
 100.		ವಳಿತ, ಪ್ರದೇಶ, ಕರ್ಣ ಪರ್ವ,8,36
 101.		ವಳಿತ, ವಲಿತ, ವಿರಾಟ ಪರ್ವ,1,4, , 
 102.		ವಳಿತ, ಅಧಿಕಾರಕ್ಕೆ ಸೇರಿದ ಪ್ರದೇಶ, ಆದಿ ಪರ್ವ,19,2
 103.		ವಾಂಛಿತ, ಬಯಸಿದ್ದು, ಭೀಷ್ಮ ಪರ್ವ,8,67
 104.		ವಾಗ್ವನಿತೆ, ವಾಣಿ, ಆದಿ ಪರ್ವ,20,46
 105.		ವಾಘೆ, ಲಗಾಮ, ಭೀಷ್ಮ ಪರ್ವ,4,96
 106.		ವಾಘೆ, ಲಗಾಮು.  ನೇಣು, ಗದಾ ಪರ್ವ,8,49
 107.		ವಾಘೆ, ಕುದುರೆಯ ಲಗಾಮು, ಗದಾ ಪರ್ವ,2,13
 108.		ವಾಚಾಟ, ಮಾತುಗಾರ, ಸಭಾ ಪರ್ವ,13,47
 109.		ವಾಚಾಟ, ವಾಚಾಳಿ , ಗದಾ ಪರ್ವ,6,16
 110.		ವಾಚಾಲಕ, ಮಾತಾಳಿ, ಆದಿ ಪರ್ವ,12,23
 111.		ವಾಚಿಸದೆ, ಓದದೆ, ಉದ್ಯೋಗ ಪರ್ವ,4,98
 112.		ವಾಚಿಸಿತು, ವಿವರಿಸಿ ಹೇಳಿತು, ಆದಿ ಪರ್ವ,11,15
 113.		ವಾಜನಿಕ, ಯಜ್ಞಕ್ಕೆ ಸಂಬಂಧಿಸಿದ (ಕ, ಸಭಾ ಪರ್ವ,14,75
 114.		ವಾಜಪೇಯಿ, ಒಂದು ಬಗೆಯ ಯಾಗ ಮಾಡಿದವನು, ಭೀಷ್ಮ ಪರ್ವ,4,6
 115.		ವಾಜಿವ್ರಜ, ಕುದುರೆ ಹಿಂಡು, ಉದ್ಯೋಗ ಪರ್ವ,11,41
 116.		ವಾಜಿವ್ರಜ, ಕುದುರೆಗಳ, ಶಲ್ಯ ಪರ್ವ,2,4
 117.		ವಾಡಬ, ಬಡಬಾನಲ, ಭೀಷ್ಮ ಪರ್ವ,4,17
 118.		ವಾಡಬಾನಲ, ಬಾಡಬಾಗ್ನಿ, ವಿರಾಟ ಪರ್ವ,8,4
 119.		ವಾಣಿಜ್ಯ, ವ್ಯಾಪಾರ, ಗದಾ ಪರ್ವ,4,11
 120.		ವಾಣಿಯ, ವ್ಯಾಪಾರ, ಸಭಾ ಪರ್ವ,15,37
 121.		ವಾತಜ, ವಾಯುವಿನ ಪುತ್ರ, ಗದಾ ಪರ್ವ,5,53
 122.		ವಾತಾಯನಿತ, ಬೆಳಕಿಂಡಿಗಳಿಂದ ಕೂಡಿದ., ದ್ರೋಣ ಪರ್ವ,12,22
 123.		ವಾದೋತ್ತರ, ವಾದ ಮತ್ತು ಉತ್ತರ, ಗದಾ ಪರ್ವ,4,43
 124.		ವಾದ್ಯವಿತಾನ, ವಾದ್ಯ ಸಮೂಹ, ವಿರಾಟ ಪರ್ವ,9,24
 125.		ವಾನಾಯುಜ, (ವಾಯವ್ಯ ದಿಕ್ಕಿನಲ್ಲಿರುವ ವಾನಾಯ ದೇಶದಲ್ಲಿ ಹುಟ್ಟಿದ) ಕುದುರೆ., ಕರ್ಣ ಪರ್ವ,11,22
 126.		ವಾಮದುಡಿಕೆ, ಎಡಭಾಗ ಅದುರುವುದು, ಸಭಾ ಪರ್ವ,13,2
 127.		ವಾಮನ, ಕುಬ್ಜ, ಆದಿ ಪರ್ವ,12,21
 128.		ವಾಮಪಾದ, ಎಡಗಾಲು., ಗದಾ ಪರ್ವ,9,28
 129.		ವಾಮಭುಜಾಕ್ಷಿ, ಎಡಭುಜ ಮತ್ತು ಎಡಕಣ್ಣು, ಗದಾ ಪರ್ವ,8,6
 130.		ವಾಮಲೋಚನೆ, ಸುಂದರವಾದ ಕಣ್ಣುಳ್ಳವಳು, ಆದಿ ಪರ್ವ,18,11
 131.		ವಾಮಹಸ್ತ, ಎಡಗೈ, ಗದಾ ಪರ್ವ,7,32
 132.		ವಾಮಾಂಕ, ಎಡಪಕ್ಕ, ಆದಿ ಪರ್ವ,17,11
 133.		ವಾಮಾಂಗ, ಎಡಗಾಲು, ಗದಾ ಪರ್ವ,8,13
 134.		ವಾಮಾಂಗ, ದೇಹದ ಎಡಭಾಗ, ಗದಾ ಪರ್ವ,7,9
 135.		ವಾಯ, ನಿಷ್ಪ್ರಯೋಜನ, ಆದಿ ಪರ್ವ,6,42
 136.		ವಾಯ, ಮೋಸ , ಗದಾ ಪರ್ವ,8,12
 137.		ವಾಯ, ಮೋಸ, ದ್ರೋಣ ಪರ್ವ,19,37
 138.		ವಾಯುಸುತ, ಭೀಮಸೇನ, ಆದಿ ಪರ್ವ,7,51
 139.		ವಾರಕ, ಉಡುಗೊರೆ, ಅರಣ್ಯ ಪರ್ವ,17,28
 140.		ವಾರಣದ ಮೋಹರ, ಆನೆ ಸೇನೆ, ಭೀಷ್ಮ ಪರ್ವ,4,74
 141.		ವಾರಣಪ್ರತತಿ, ಆನೆಗಳ ಸಮೂಹ, ಆದಿ ಪರ್ವ,18,6
 142.		ವಾರಣಾಖ್ಯಾನ, ವಾರಣಾಸಿಯೆಂಬ ಪ್ರಸಿದ್ಧ ಕ್ಷೇತ್ರ, ಗದಾ ಪರ್ವ,6,11
 143.		ವಾರತೆ, ವಾರ್ತೆ , ಅರಣ್ಯ ಪರ್ವ,9,3
 144.		ವಾರಸ್ತ್ರೀ, ವೇಶ್ಯೆ, ಆದಿ ಪರ್ವ,8,38
 145.		ವಾರಿಜಾನನೆ, ತಾವರೆಯಂತೆ ಅರಳಿದ ಕಣ್ಣುಳ್ಳವಳು, ವಿರಾಟ ಪರ್ವ,3,96
 146.		ವಾರಿಡುವ, ಪ್ರವಾಹವಾಗಿ ಹರಿಯುವ, ಭೀಷ್ಮ ಪರ್ವ,4,9
 147.		ವಾರಿದತರು, ಮಳೆಮರ, ಭೀಷ್ಮ ಪರ್ವ,4,16
 148.		ವಾರಿಧಿ, ಕಡಲು, ಉದ್ಯೋಗ ಪರ್ವ,8,71
 149.		ವಾರುವ, ಕುದುರೆ., ಆದಿ ಪರ್ವ,18,6
 150.		ವಾರುವದ ಮಂದಿರ, ಕುದುರೆÉ ಲಾಯ, ವಿರಾಟ ಪರ್ವ,5,43
 151.		ವಾರ್ತೆ, ಸಮಾಚಾರ, ಆದಿ ಪರ್ವ,17,1
 152.		ವಾರ್ಧಿಕ ರಚಿತ ನುಡಿಯನು, ದೀರ್ಘಕಾಲದ ಅನುಭವದ ಮಾತನ್ನು, ಭೀಷ್ಮ ಪರ್ವ,1,25
 153.		ವಾರ್‍ಧುಷಿಕ, ವಾರ್ಧುಷಿಕ, ಉದ್ಯೋಗ ಪರ್ವ,4,48
 154.		ವಾಲಧಿ, ಬಾಲ, ಗದಾ ಪರ್ವ,1,58
 155.		ವಾಸನೆ, ಸಂಸ್ಕಾರ, ಕರ್ಣ ಪರ್ವ,17,22
 156.		ವಾಸರ, ದಿನ, ಆದಿ ಪರ್ವ,11,19
 157.		ವಾಸವಸುತ, ಇಂದ್ರನಮಗ, ಗದಾ ಪರ್ವ,11,42
 158.		ವಾಸಿ, ಭಾಷೆ, ಆದಿ ಪರ್ವ,15,40
 159.		ವಾಸಿ, ಸ್ಪರ್ಧೆ, ದ್ರೋಣ ಪರ್ವ,13,10
 160.		ವಾಸಿ, ಶ್ರೇಷ್ಠತೆ (ಇಲ್ಲಿ, ಶಲ್ಯ ಪರ್ವ,1,35
 161.		ವಾಸಿ, ಪ್ರತಿಜ್ಞೆ, ಕರ್ಣ ಪರ್ವ,13,3
 162.		ವಾಸಿ, ಪಂಥ, ಕರ್ಣ ಪರ್ವ,20,25
 163.		ವಾಸಿ, ಪಣ, ಸಭಾ ಪರ್ವ,14,14
 164.		ವಾಸಿ, ಸ್ಥಿತಿ, ಕರ್ಣ ಪರ್ವ,22,39
 165.		ವಾಸಿ, ಮೇಲ್ಮೆ, ಗದಾ ಪರ್ವ,8,41
 166.		ವಾಸಿ, ಮೇಲು ಕೀಳು, ಗದಾ ಪರ್ವ,10,25
 167.		ವಾಸಿ, ಛಲ, ವಿರಾಟ ಪರ್ವ,7,20
 168.		ವಾಸಿ, ಹೆಚ್ಚುಗಾರಿಕೆ, ಗದಾ ಪರ್ವ,10,7
 169.		ವಾಸುಕಿ, ಸರ್ಪರಾಜ , ಕರ್ಣ ಪರ್ವ,22,7
 170.		ವಾಸ್ತುವಿಧೇಯ, ವಾಸ್ತುಶಾಸ್ತ್ರಕ್ಕೆ ಅನುಗುಣವಾಗಿ, ಆದಿ ಪರ್ವ,7,13
 171.		ವಾಹಿನಿ, ಸೈನ್ಯ  ವಸನ, ಉದ್ಯೋಗ ಪರ್ವ,3,108
 172.		ವಿ, ಷ್ವಕ್ಸೇನ, ಉದ್ಯೋಗ ಪರ್ವ,4,24
 173.		ವಿಕಟ, ಭೀಕರ, ಅರಣ್ಯ ಪರ್ವ,8,22
 174.		ವಿಕಟತೆ, ವಿಪರ್ಯಾಸ, ಆದಿ ಪರ್ವ,8,89
 175.		ವಿಕರ್ಮ, ಕೆಟ್ಟ ಕೆಲಸ, ವಿರಾಟ ಪರ್ವ,3,2
 176.		ವಿಕಳ, ಅಲ್ಪ, ಆದಿ ಪರ್ವ,8,58
 177.		ವಿಕಳ, ಧೈರ್ಯಗುಂದಿದ , ಗದಾ ಪರ್ವ,1,64
 178.		ವಿಕಳತೆ, ಹೊಲಸು, ಉದ್ಯೋಗ ಪರ್ವ,3,137
 179.		ವಿಕಳರ್, ಹೇಡಿಗಳು, ಕರ್ಣ ಪರ್ವ,20,16
 180.		ವಿಕಾರ, ಉದ್ವೇಗ, ಆದಿ ಪರ್ವ,18,6
 181.		ವಿಕಾರ, ಕೆಟ್ಟಸ್ವರೂಪ, ಗದಾ ಪರ್ವ,9,21
 182.		ವಿಕಾರಿತನ, ವಿಕೃತಮನದಿಂದ ವರ್ತಿಸುವುದು., ಭೀಷ್ಮ ಪರ್ವ,9,42
 183.		ವಿಕಾಳಿಸಿತು, ವ್ಯಾಪಿಸಿತು, ಆದಿ ಪರ್ವ,19,41
 184.		ವಿಕಾಳಿಸು, ಘೋರವಾಗು, ಸಭಾ ಪರ್ವ,12,47
 185.		ವಿಕೃತವಿಳಾಸ, ಸಹಜವಲ್ಲದ ನಡವಳಿಕೆ, ಗದಾ ಪರ್ವ,11,29
 186.		ವಿಕ್ರಮ, ಪ್ರತಾಪ, ಗದಾ ಪರ್ವ,7,14
 187.		ವಿಕ್ರಮ, ಪರಾಕ್ರಮ ಬಲ ಒಡೆಮುರಿಚು... ಈ ಶಬ್ದಕ್ಕೆ ಒಡೆಯುವಂತೆ ಹಿಂದಿರುಗಿಸು ಎಂಬ ಅರ್ಥವನ್ನು ಕನ್ನಡ ಕನ್ನಡ ನಿಘಂಟಿನಲ್ಲಿ ಮತ್ತು ಕೃಷ್ಣಜೋಯಿಸರ ವಿರಾಟ ಪರ್ವ 10, ವಿರಾಟ ಪರ್ವ,9,30
 188.		ವಿಕ್ರಮ ವಹ್ನಿ, ಸಾಹಸಾಗ್ನಿ, ಭೀಷ್ಮ ಪರ್ವ,10,17
 189.		ವಿಕ್ರಮ ಹೀನರು, ಶೌರ್ಯವಿಲ್ಲದವರು, ಭೀಷ್ಮ ಪರ್ವ,7,20
 190.		ವಿಕ್ರಮದ ವಿವರಣ ವಿದ್ಯೆ ಫಲಿಸುವುದೆ, ಪರಾಕ್ರಮ ತೋರುವ ವಿದ್ಯೆ ಫಲಿಸುವದೆಎ, ವಿರಾಟ ಪರ್ವ,8,53
 191.		ವಿಕ್ರಮದರಿದ್ರ, ಹೇಡಿ, ದ್ರೋಣ ಪರ್ವ,1,70
 192.		ವಿಕ್ರಮದುದಧಿ, ಪರಾಕ್ರಮ ಸಮುದ್ರ, ಗದಾ ಪರ್ವ,3,29
 193.		ವಿಕ್ರಮಾನಲ, ಸಾಹಸವೆಂಬ ಅಗ್ನೀ, ಭೀಷ್ಮ ಪರ್ವ,8,0
 194.		ವಿಖ್ಯಾತ, ಹೆಸರಾದ, ಆದಿ ಪರ್ವ,13,51
 195.		ವಿಗಡ, ಭಯಂಕರ , ಆದಿ ಪರ್ವ,8,30
 196.		ವಿಗಡ, ಶೂರ ಮೈವಳಿ, ಸಭಾ ಪರ್ವ,2,109
 197.		ವಿಗಡ, ಶ್ರೇಷ್ಠನಾದ., ಗದಾ ಪರ್ವ,3,7
 198.		ವಿಗಡ, ಪ್ರಬುದ್ಧ, ಉದ್ಯೋಗ ಪರ್ವ,8,70
 199.		ವಿಗಡ, ಮಹಾ ಪ್ರತಾಪಶಾಲಿ, ವಿರಾಟ ಪರ್ವ,1,14
 200.		ವಿಗಡ, ಉದ್ಧಟ, ಸಭಾ ಪರ್ವ,2,19
 201.		ವಿಗಡ, ಕ್ರೂರ, ಆದಿ ಪರ್ವ,20,64
 202.		ವಿಗಡ, ದುಷ್ಕರ, ಸಭಾ ಪರ್ವ,2,34
 203.		ವಿಗಡ, ದೊಡ್ಡ, ಆದಿ ಪರ್ವ,7,73
 204.		ವಿಗಡ ವಿಗ್ರಹ, ಘೋರಸಮರ, ಭೀಷ್ಮ ಪರ್ವ,6,3
 205.		ವಿಗಡತನ, ಶೌರ್ಯ, ಭೀಷ್ಮ ಪರ್ವ,7,12
 206.		ವಿಗಡತನ, ನೀಚತನ, ದ್ರೋಣ ಪರ್ವ,6,34
 207.		ವಿಗಡತನ, ಹಠ, ಉದ್ಯೋಗ ಪರ್ವ,10,31
 208.		ವಿಗಡತನ, ಕ್ರೌರ್ಯ, ಸಭಾ ಪರ್ವ,15,47
 209.		ವಿಗಡತನ, ಕ್ರೌರ್ಯ, ಕರ್ಣ ಪರ್ವ,24,21
 210.		ವಿಗಡವಿಕಾರನು, ಮಾರ್ಪಾಡನ್ನು ಹೊಂದದವನು, ಭೀಷ್ಮ ಪರ್ವ,3,43
 211.		ವಿಗಡಿಸಲು, ವಿರೋಧಿಸÀಲು, ಭೀಷ್ಮ ಪರ್ವ,1,21
 212.		ವಿಗಡಿಸು, ಹೆದರಿಸು, ಆದಿ ಪರ್ವ,15,10
 213.		ವಿಗಡಿಸು, ತೊಂದರೆಗೀಡುಮಾಡು, ಅರಣ್ಯ ಪರ್ವ,5,11
 214.		ವಿಗತಲೋಚನ, ಕಣ್ಣಿಲ್ಲದವನು ಧೃತರಾಷ್ಟ್ರ, ಗದಾ ಪರ್ವ,11,72
 215.		ವಿಗತವೈರ, ವೈರವಿಲ್ಲದ, ಗದಾ ಪರ್ವ,5,2
 216.		ವಿಗತಾನಂದ, ಸಂತೋಷ ಕುಂದಿದ, ಭೀಷ್ಮ ಪರ್ವ,10,18
 217.		ವಿಗಾಹನ, ನದಿಯಲ್ಲಿ ಮುಳುಗುವುದು (ಸ್ನಾನ ಮಾಡುವುದು), ಅರಣ್ಯ ಪರ್ವ,1,8
 218.		ವಿಗುರ್ವಣೆ, ಭಯಾನಕತೆ, ಅರಣ್ಯ ಪರ್ವ,12,23
 219.		ವಿಗ್ರಹ, ಮೂರ್ತಿ, ಆದಿ ಪರ್ವ,19,10
 220.		ವಿಗ್ರಹ, ಯುದ್ದ, ಗದಾ ಪರ್ವ,10,0
 221.		ವಿಗ್ರಹ, ಕಲಹ, ಆದಿ ಪರ್ವ,18,26
 222.		ವಿಗ್ರಹ, ಕಾಳಗ, ಉದ್ಯೋಗ ಪರ್ವ,3,79
 223.		ವಿಗ್ರಹ, ದೇಹ, ಉದ್ಯೋಗ ಪರ್ವ,4,39
 224.		ವಿಘಳಿಗೆ, (ಸಂ: ವಿಘಟಿಕಾ), ಕರ್ಣ ಪರ್ವ,15,23
 225.		ವಿಘಾತ, ಹೊಡೆತ , ಗದಾ ಪರ್ವ,5,33, , ,  ಆಘಾತ.
 226.		ವಿಘಾತಕ, ಕೊಲೆಗಾರ, ದ್ರೋಣ ಪರ್ವ,19,25
 227.		ವಿಘಾತದಲಿ, ಈ ಪೆಟ್ಟಿನ ದೆಸೆಯಿಂದ, ಸಭಾ ಪರ್ವ,2,81
 228.		ವಿಘಾತಿ, ವಿನಾಶ, ಶಲ್ಯ ಪರ್ವ,3,56
 229.		ವಿಘಾತಿ, ವಿರೋಧ, ಗದಾ ಪರ್ವ,8,27
 230.		ವಿಘಾತಿ, ಹಾನಿ, ಕರ್ಣ ಪರ್ವ,13,1
 231.		ವಿಘಾತಿ, ಹೊಡೆತ, ಗದಾ ಪರ್ವ,7,33
 232.		ವಿಘಾತಿ, ಕಷ್ಟ , ಗದಾ ಪರ್ವ,1,45
 233.		ವಿಘಾತಿ, ಕೇಡು, ಉದ್ಯೋಗ ಪರ್ವ,3,122
 234.		ವಿಘಾತಿಸಿ, ಗಾಯಗೊಳಿಸಿ, ಭೀಷ್ಮ ಪರ್ವ,4,79
 235.		ವಿಘಾಯ, ಕ್ರೂರ, ಆದಿ ಪರ್ವ,7,0
 236.		ವಿಘ್ನಶತ, ನೂರು ವಿಘ್ನಗಳು, ಗದಾ ಪರ್ವ,9,11
 237.		ವಿಜಯ, ಅರ್ಜುನನ ದಶನಾಮಗಳಲ್ಲಿ ಒಂದು, ಆದಿ ಪರ್ವ,20,63
 238.		ವಿಜಯಾಂಗನೋಪಕ್ಷೀಣ ಮಾನಸರು, ವಿಜಯಲಕ್ಷ್ಮಿಯು ತಿರಸ್ಕರಿಸಿದ ಮನುಷ್ಯರು., ಶಲ್ಯ ಪರ್ವ,1,26
 239.		ವಿಜಯಾತ್ಮಕ, ಅರ್ಜುನನ ಮಗ, ದ್ರೋಣ ಪರ್ವ,5,1
 240.		ವಿಜಿತ, ಗೆಲ್ಲಲ್ಪಟ್ಟವನು , ಶಲ್ಯ ಪರ್ವ,3,47
 241.		ವಿಟ, ಕಾಮುಕ, ಆದಿ ಪರ್ವ,13,42
 242.		ವಿಟಪ, ಮರದಕೊಂಬೆ, ಗದಾ ಪರ್ವ,9,1
 243.		ವಿಟಾಳ, ಮಾಲಿನ್ಯ , ಅರಣ್ಯ ಪರ್ವ,18,10
 244.		ವಿಟಾಳ, ಅಪವಿತ್ರ, ಕರ್ಣ ಪರ್ವ,9,20
 245.		ವಿಟಾಳವಿಲ್ಲದೆ, ಯಾವ ಮನೋವಿಕಾರವೂ ಇಲ್ಲದೆ, ಸಭಾ ಪರ್ವ,16,42
 246.		ವಿಟಾಳಿಸು, ಹೊಲಸಾಗು, ಸಭಾ ಪರ್ವ,12,47
 247.		ವಿಡಂಬ, ವೈಭವÀ, ಗದಾ ಪರ್ವ,2,33
 248.		ವಿಡಂಬದ, ಅವಹೇಳನದ, ಗದಾ ಪರ್ವ,11,63
 249.		ವಿಡಂಬನ, ಸೋಗು, ಗದಾ ಪರ್ವ,5,5, , 
 250.		ವಿಡಂಬನೆ, ಅಪಹಾಸ್ಯ, ಗದಾ ಪರ್ವ,1,22
 251.		ವಿಡಂಬಿಸುವ, ಮೋಸಮಾಡುವ, ಗದಾ ಪರ್ವ,11,50
 252.		ವಿಡಾಯಿ, ಬಲ, ದ್ರೋಣ ಪರ್ವ,2,59
 253.		ವಿಡಾಯಿ, ಆಡಂಬರ, ಉದ್ಯೋಗ ಪರ್ವ,8,46
 254.		ವಿಡಾಯಿಗೆಟ್ಟನು, ಶಕ್ತಿಗುಂದಿದನು, ದ್ರೋಣ ಪರ್ವ,2,59
 255.		ವಿಡಾಯ್ಲತನ, ಆಡಂಬರ , ಗದಾ ಪರ್ವ,1,48
 256.		ವಿಡಾಳ, ವಿಡಾಯ? ವಿಢಾಳ?, ಕರ್ಣ ಪರ್ವ,14,29
 257.		ವಿತತ, ಶ್ರೇಷ್ಠವಾದ , ಆದಿ ಪರ್ವ,2,9
 258.		ವಿತರ್ಜೆ, ಹೆದರಿಕೆ, ಉದ್ಯೋಗ ಪರ್ವ,4,20
 259.		ವಿತಳ, ಭೂಲೋಕದ ಕೆಳಗಿರುವ 7 ಲೋಕಗಳಲ್ಲಿ 2ನೆಯದು (ಅತಳ , ಭೀಷ್ಮ ಪರ್ವ,6,27, , ,  ತಲಾತಲಾ,  ಮಹಾತಲ ,  ಪಾತಾಳ), 
 260.		ವಿತಳ, ಸಪ್ತ ಅಧೋ ಲೋಕಗಳಲ್ಲಿ ಒಂದು. ಅತಲ , ವಿರಾಟ ಪರ್ವ,4,2, , ,   ಸುತಲ ,  ತಲಾತಲ,  ಮಹಾತಲ ,  ಪಾತಾಳ, 
 261.		ವಿತಳ, ಪಾತಾಳ, ವಿರಾಟ ಪರ್ವ,8,25
 262.		ವಿತಾನ, ಸಾಮ್ರಾಜ್ಯ, ಉದ್ಯೋಗ ಪರ್ವ,4,74
 263.		ವಿತಾನ, ಅಂಚುತೋರಣ , ಗದಾ ಪರ್ವ,1,48, ,
 264.		ವಿತಾಳ, ಅಪಾಯ, ಕರ್ಣ ಪರ್ವ,25,1
 265.		ವಿತಾಳವಾಗದೆ, ತಾಳ ತಪ್ಪಿ ಹೋಗುವುದಿಲ್ಲವೇ ? ಕೆಟ್ಟು ಹೋಗುವುದಿಲ್ಲವೇ ?, ಸಭಾ ಪರ್ವ,12,62
 266.		ವಿತಾಳಿಸಿ, ತಳಮಳಗೊಂಡು, ಭೀಷ್ಮ ಪರ್ವ,6,21
 267.		ವಿತಾಳಿಸು, ಮೀರು, ಉದ್ಯೋಗ ಪರ್ವ,3,29
 268.		ವಿತಾಳಿಸು, ತಪ್ಪಿಹೋಗು, ಆದಿ ಪರ್ವ,17,15
 269.		ವಿತ್ತ, ಧನ, ವಿರಾಟ ಪರ್ವ,10,80
 270.		ವಿತ್ಪನ್ನ, ಕಾರಣರಾದವರು, ಅರಣ್ಯ ಪರ್ವ,19,9
 271.		ವಿದ, ತಿಳಿದ, ಉದ್ಯೋಗ ಪರ್ವ,3,85
 272.		ವಿದಗ್ಧ, ವಿದ್ಯಾವಂತ, ಉದ್ಯೋಗ ಪರ್ವ,3,38
 273.		ವಿದಗ್ಧೆ, ಪ್ರೌಢೆ, ಆದಿ ಪರ್ವ,13,42
 274.		ವಿದಾರಣ, ಸೀಳುವಿಕೆ (ನಿವಾರಣವಿದು ಎಂಬ ಪಾಠವೂ ಇದೆ), ವಿರಾಟ ಪರ್ವ,8,57
 275.		ವಿದಾರಿಸು, ಸೀಳು, ಗದಾ ಪರ್ವ,9,32
 276.		ವಿದಿತ, ನಿಜ, ಆದಿ ಪರ್ವ,15,22
 277.		ವಿದಿತ, ಪ್ರಸಿದ್ಧವಾದ, ಆದಿ ಪರ್ವ,2,18
 278.		ವಿದಿತ, ತಿಳಿದಿದೆ, ವಿರಾಟ ಪರ್ವ,8,31
 279.		ವಿದೂರ, ಅತಿದೂರ, ಆದಿ ಪರ್ವ,7,3
 280.		ವಿದೇಶ, ಪರದೇಶ, ಆದಿ ಪರ್ವ,19,1
 281.		ವಿದ್ಯಾ, ಬ್ರಹ್ಮವಿದ್ಯೆ, ಉದ್ಯೋಗ ಪರ್ವ,4,8
 282.		ವಿದ್ಯಾಧರ, ಇವರು ಆಕಾಶ ಮಾರ್ಗದಲ್ಲಿ ಸಂಚರಿಸುವವರು , ಗದಾ ಪರ್ವ,7,38
 283.		ವಿದ್ರಾವಣ, ಓಡಿಸುವಿಕೆ, ದ್ರೋಣ ಪರ್ವ,10,27
 284.		ವಿದ್ರಾವಣ, ಕರಗಿಸು, ಕರ್ಣ ಪರ್ವ,18,5
 285.		ವಿದ್ರುಮ, ಹವಳ, ಸಭಾ ಪರ್ವ,13,25
 286.		ವಿಧಾಯಕ, ನಿರ್ಣಯ, ಗದಾ ಪರ್ವ,4,52, 
 287.		ವಿಧಾವಂತ, ನಿರ್ವಾಹಕÀ, ಅರಣ್ಯ ಪರ್ವ,17,37
 288.		ವಿಧಾವಂತನಲಿ, ಆತುರಗಾರನಲ್ಲಿ, ಸಭಾ ಪರ್ವ,1,40
 289.		ವಿಧಿ, ವಿಧಾನ., ಗದಾ ಪರ್ವ,5,5
 290.		ವಿಧಿ, ನಿಯಮ, ಆದಿ ಪರ್ವ,18,32
 291.		ವಿಧಿ, ಪಾಡು, ಆದಿ ಪರ್ವ,8,92
 292.		ವಿಧಿ, ಅವಸ್ಥೆ, ಆದಿ ಪರ್ವ,14,17
 293.		ವಿಧಿವಿಹಿತ, ಶಾಸ್ತ್ರಗಳು ವಿಧಿಸಿರುವಂತಹ, ಗದಾ ಪರ್ವ,12,24
 294.		ವಿಧುಂತುದ, ರಾಹು, ದ್ರೋಣ ಪರ್ವ,4,58
 295.		ವಿಧೂತ, ನಡುಗಿಸುವ, ದ್ರೋಣ ಪರ್ವ,3,62
 296.		ವಿಧೂತ, ನಿವಾರಿಸಲ್ಪಟ್ಟ, ಆದಿ ಪರ್ವ,2,15
 297.		ವಿಧೂತ, ಅಲುಗಾಡಿಸಲ್ಪಟ್ಟ, ಗದಾ ಪರ್ವ,3,15
 298.		ವಿಧೂತ, ಹೋಗಲಾಡಿಸಲ್ಪಟ್ಟ, ಆದಿ ಪರ್ವ,4,24
 299.		ವಿಧೂತ, ತೊಳೆಯಲ್ಪಟ್ಟ, ಆದಿ ಪರ್ವ,16,10
 300.		ವಿಧೂತರಿಪು, ವಿರೋಧಿಗಳ ಶತ್ರು, ಗದಾ ಪರ್ವ,3,33
 301.		ವಿನತ, ಬಾಗಿದ, ಆದಿ ಪರ್ವ,15,37
 302.		ವಿನಯ, ನಮ್ರತೆ, ಉದ್ಯೋಗ ಪರ್ವ,4,109
 303.		ವಿನಿಯೋಗಿ, ಅಧಿಕಾರಿ, ಆದಿ ಪರ್ವ,8,51
 304.		ವಿನಿರ್ಮಿತ, ರಚಿಸಿದ, ಆದಿ ಪರ್ವ,18,5
 305.		ವಿನೀತ, ಸರಳ/ನಿರಾಡಂಬರ, ಉದ್ಯೋಗ ಪರ್ವ,3,91
 306.		ವಿನೀತ, ನಮ್ರ, ಉದ್ಯೋಗ ಪರ್ವ,3,87
 307.		ವಿನುತ, ಹೊಗಳಲ್ಪಡುವ/ಸ್ತುತಿಗೊಂಡ, ಉದ್ಯೋಗ ಪರ್ವ,3,91
 308.		ವಿನೋದದಿ, ತಮಾಷೆಯಿಂದ, ದ್ರೋಣ ಪರ್ವ,3,40
 309.		ವಿನ್ಯಸ್ತ, ರಚಿಸಿದ, ಗದಾ ಪರ್ವ,3,19
 310.		ವಿನ್ಯಾಸ, ವಿಧಾನ, ಆದಿ ಪರ್ವ,16,29
 311.		ವಿಪತ್ತು, ಆಪತ್ತು , ಆದಿ ಪರ್ವ,2,24
 312.		ವಿಪತ್ತು, ಆಪತ್ತು , ಆದಿ ಪರ್ವ,4,14
 313.		ವಿಪತ್ತು, ಕೆಟ್ಟಪರಿಣಾಮಗಳು, ಗದಾ ಪರ್ವ,11,12
 314.		ವಿಪತ್ಸರಂಪರೆ, ಸಂಕಟಗಳ ಸಾಲು, ಉದ್ಯೋಗ ಪರ್ವ,3,135
 315.		ವಿಪನ್ನ, ಕಷ್ಟಕ್ಕೆ ಗುರಿಯಾದವನು, ಆದಿ ಪರ್ವ,16,43
 316.		ವಿಪರೀತ, ತಿರುಗು ಮುರುಗು, ವಿರಾಟ ಪರ್ವ,7,3
 317.		ವಿಪಾಕದೊಳು, ಪಕ್ವವಾದ ಮೇಲೆ , ಸಭಾ ಪರ್ವ,12,89
 318.		ವಿಪಿನಾಂತರ, ಕಾಡಿನ ಮಧ್ಯಭಾಗ, ಆದಿ ಪರ್ವ,17,8
 319.		ವಿಪಿನಾಂತರ, ಕಾಡಿನಿಂದ ದೂರ, ಆದಿ ಪರ್ವ,9,13
 320.		ವಿಪಿನಾಂತರ ಪರಿಕ್ರಮ, ಕಾಡನಲ್ಲಿ ಸಂಚಾರ, ಅರಣ್ಯ ಪರ್ವ,14,13
 321.		ವಿಪಿನೋಪಕಂಠ, ಕಾಡಿನ ಅಂಚು, ಅರಣ್ಯ ಪರ್ವ,22,6
 322.		ವಿಪುಳ, ವಿಶೇಷವಾದ, ಆದಿ ಪರ್ವ,4,8
 323.		ವಿಪ್ರವೇಷಚ್ಛನ್ನ, ಬ್ರಾಹ್ಮಣ ವೇಷದಿಂದ ಮರೆಸಿಕೊಂಡವನು, ಆದಿ ಪರ್ವ,15,16
 324.		ವಿಪ್ರಾವಳಿ, ಬ್ರಾಹ್ಮಣ ಸಮೂಹ, ಗದಾ ಪರ್ವ,9,41
 325.		ವಿಬಂಧ, ವಿಶೇಷವಾದ ಬಂಧ, ಆದಿ ಪರ್ವ,7,49
 326.		ವಿಬುಧರು, ಪಂಡಿತರು, ಉದ್ಯೋಗ ಪರ್ವ,8,69
 327.		ವಿಭಾಗಿಸು, ತುಂಡು ಮಾಡು, ಗದಾ ಪರ್ವ,9,5
 328.		ವಿಭಾಡಿಸಿ, ಎದುರಿಸಿ, ಗದಾ ಪರ್ವ,5,7
 329.		ವಿಭಾಡಿಸು, ಭಂಗಿಸು, ಗದಾ ಪರ್ವ,8,32
 330.		ವಿಭಾಡಿಸು, ಭೇದಿಸು, ಆದಿ ಪರ್ವ,14,2
 331.		ವಿಭಾಡಿಸು, ಸೋಲಿಸು, ಶಲ್ಯ ಪರ್ವ,3,75
 332.		ವಿಭಾಡಿಸು, ಸೋಲಿಸು, ಗದಾ ಪರ್ವ,2,4
 333.		ವಿಭಾಡಿಸು, ಧಿಕ್ಕರಿಸು, ದ್ರೋಣ ಪರ್ವ,15,9
 334.		ವಿಭಾಡಿಸು, ಧಿಕ್ಕರಿಸು , ಗದಾ ಪರ್ವ,1,43, , 
 335.		ವಿಭಾಡಿಸು, ನಿಂದಿಸು, ಉದ್ಯೋಗ ಪರ್ವ,3,41
 336.		ವಿಭಾಡಿಸು, ಪರಾಜಯಗೊಳ್ಳು, ಆದಿ ಪರ್ವ,17,3
 337.		ವಿಭಾಡಿಸು, ಆಹುತಿಯಾಗಿಕೊಡು, ಆದಿ ಪರ್ವ,10,13
 338.		ವಿಭಾಡಿಸು, ಆಕ್ರಮಿಸು , ಅರಣ್ಯ ಪರ್ವ,12,61
 339.		ವಿಭಾಡಿಸುವುದು, ಹೀಯಾಳಿಸುವುದು, ಭೀಷ್ಮ ಪರ್ವ,9,36
 340.		ವಿಭು, ಪಾಲಕ , ವಿರಾಟ ಪರ್ವ,10,78
 341.		ವಿಭುಗಳು, ಅರಸರು, ಭೀಷ್ಮ ಪರ್ವ,5,0
 342.		ವಿಭುಗಳು, ದೇವರು, ಉದ್ಯೋಗ ಪರ್ವ,8,38
 343.		ವಿಭೇದ, ಒಡೆಯುವಿಕೆ, ಆದಿ ಪರ್ವ,2,12
 344.		ವಿಭ್ರಮ, ಭ್ರಮೆ, ಆದಿ ಪರ್ವ,8,36
 345.		ವಿಭ್ರಮ, ಅಲೆದಾಟ, ಆದಿ ಪರ್ವ,19,22
 346.		ವಿಮಲ, ಶುದ್ಧವಾದ, ಗದಾ ಪರ್ವ,5,56
 347.		ವಿಮಾನ, ಅಪಮಾನ, ಉದ್ಯೋಗ ಪರ್ವ,3,44
 348.		ವಿಮಾನ, ರಾಜಗೃಹ , ಅರಣ್ಯ ಪರ್ವ,7,74
 349.		ವಿಯೋಗ, ಯೋಗ ಘಟಿಸದ, ವಿರಾಟ ಪರ್ವ,2,51
 350.		ವಿರಚಿಸು, ನಿರ್ಮಿಸು, ಆದಿ ಪರ್ವ,8,69
 351.		ವಿರಚಿಸು, ರಚಿಸು, ಗದಾ ಪರ್ವ,8,54
 352.		ವಿರಡ, ವಿರಾಟ, ಆದಿ ಪರ್ವ,1,18
 353.		ವಿರಥ, ರಥವಿಲ್ಲದವ, ಆದಿ ಪರ್ವ,2,36
 354.		ವಿರಥ, ರಥವಿಲ್ಲದಂತಾಗುವುದು, ದ್ರೋಣ ಪರ್ವ,6,21
 355.		ವಿರಥನ ಮಾಡು, ರಥವನ್ನು ನಾಶಮಾಡು, ಭೀಷ್ಮ ಪರ್ವ,5,24
 356.		ವಿರಸ, ಪೀಡೆ, ಆದಿ ಪರ್ವ,8,47
 357.		ವಿರಹ, ಅಗಲಿಕೆಯ ತಾಪ, ವಿರಾಟ ಪರ್ವ,3,0
 358.		ವಿರಹಿತ, ಇಲ್ಲದ, ಉದ್ಯೋಗ ಪರ್ವ,4,105
 359.		ವಿರಾಗ, ವೈರಾಗ್ಯ, ಗದಾ ಪರ್ವ,11,24
 360.		ವಿರಾಟಜ, ವಿರಾಟನಮಗ, ಗದಾ ಪರ್ವ,5,18
 361.		ವಿರಾಮ, ಅಂತ್ಯ, ಉದ್ಯೋಗ ಪರ್ವ,9,5
 362.		ವಿರಾಮ, ಕೊನೆ, ಆದಿ ಪರ್ವ,16,35
 363.		ವಿರಾಮವಾಗದೆ, (ನಿಮ್ಮ ಅಣ್ಣಧರ್ಮರಾಯನ ಆಜ್ಞೆಗೆ) ಕುಂದಿಲ್ಲದಂತೆ, ವಿರಾಟ ಪರ್ವ,3,65
 364.		ವಿರಿಂಚಸೃಷ್ಟಿ, ಬ್ರಹ್ಮನ ಸೃಷ್ಟಿ, ಭೀಷ್ಮ ಪರ್ವ,1,49
 365.		ವಿರಿಂಚಿಪ್ರಭವ, ಬ್ರಹ್ಮನ ಮಾನಸಪುತ್ರ , ಸಭಾ ಪರ್ವ,1,0
 366.		ವಿರೂಪನ, ರೂಪರಹಿತನಾದನವನ್ನು, ಭೀಷ್ಮ ಪರ್ವ,3,66
 367.		ವಿರೋಧ, ವೈರ, ಆದಿ ಪರ್ವ,17,18
 368.		ವಿರೋಧಿಸಂತತಿ, ಶತ್ರುಗಳ ಬಳಗ, ಗದಾ ಪರ್ವ,9,2
 369.		ವಿಲಂಬ, ವಿಳಂಬ, ಗದಾ ಪರ್ವ,2,22
 370.		ವಿಲಂಬಿತ, ಅವಲಂಬಿತವಾದ, ಆದಿ ಪರ್ವ,18,5
 371.		ವಿಲಗ, ವಿರೋಧ, ಅರಣ್ಯ ಪರ್ವ,6,16
 372.		ವಿಲಗ, ತೊಂದರೆ , ಸಭಾ ಪರ್ವ,1,2
 373.		ವಿಲಗ, ತೊಂದರೆ, ದ್ರೋಣ ಪರ್ವ,9,45
 374.		ವಿಲಗಿಗ, ಹಂಗಿಗ, ದ್ರೋಣ ಪರ್ವ,9,32
 375.		ವಿಲಯ ಕೃತಾಂತ, ಪ್ರಳಯ ಕಾಲದ ಯಮ, ಭೀಷ್ಮ ಪರ್ವ,5,10
 376.		ವಿಲಯ ಮಹೋಗ್ರ ಸನ್ನಿಭ, ಮಹಾ ಉಗ್ರವಾದ ಪ್ರಳಯಕ್ಕೆ ಸಮಾನನಾದ (ಭೀಮ), ವಿರಾಟ ಪರ್ವ,4,57
 377.		ವಿಲಯಕೃತಾಂತ, ಪ್ರಳಯಕಾಲದ ಯಮ, ಗದಾ ಪರ್ವ,7,29
 378.		ವಿಲಯದ ಮಳೆ, ಪ್ರಳಯಕಾಲದ ಮಳೆ, ಭೀಷ್ಮ ಪರ್ವ,4,9
 379.		ವಿಲಯಶಿವ, ಪ್ರಳಯರುದ್ರ, ಭೀಷ್ಮ ಪರ್ವ,10,5
 380.		ವಿಲಯಹರ, ವಿನಾಶಕಾರಿಯಾದ ರುದ್ರ, ವಿರಾಟ ಪರ್ವ,6,0
 381.		ವಿಲಸ, ವಿಲಾಸ, ಆದಿ ಪರ್ವ,13,23
 382.		ವಿಲಸ, ಕಾಂತಿಯುತ, ಆದಿ ಪರ್ವ,20,13
 383.		ವಿಲಸತ್, ಪವಿತ್ರವಾದ, ದ್ರೋಣ ಪರ್ವ,3,66
 384.		ವಿಲಸತ್, ಹೊಳೆಯುತ್ತಿದ್ದ, ಸಭಾ ಪರ್ವ,1,20
 385.		ವಿಲಸತ್ ಕೇಳಿ, ವಿನೋದ ಕ್ರೀಡೆ, ಭೀಷ್ಮ ಪರ್ವ,5,15
 386.		ವಿಲಾಸ, ಲಾವಣ್ಯ , ಶಲ್ಯ ಪರ್ವ,3,64, , ,  ವಿನೋದ, 
 387.		ವಿಲಾಸ, ಸೌಂದರ್ಯ, ಆದಿ ಪರ್ವ,18,11
 388.		ವಿಲಾಸ, ವಿಹಾರ, ಆದಿ ಪರ್ವ,19,24
 389.		ವಿಲಾಸ, ಒಯ್ಯಾರ, ಆದಿ ಪರ್ವ,5,11
 390.		ವಿಲಾಸ, ಚೆಲುವು, ಆದಿ ಪರ್ವ,15,25
 391.		ವಿಲಾಸಿನಿ, ವೇಶ್ಯೆ, ಆದಿ ಪರ್ವ,15,41
 392.		ವಿಲಾಸಿನಿಯರು, ಬೆಡಗಿಯರು (ಚೆಲುವೆಯರು), ಉದ್ಯೋಗ ಪರ್ವ,7,28
 393.		ವಿಲೋಕನ, ನೋಡುವಿಕೆ, ಆದಿ ಪರ್ವ,19,8
 394.		ವಿಲೋಕನ, ನೋಡುವ, ಆದಿ ಪರ್ವ,12,22
 395.		ವಿಲೋಮ, ಪ್ರತಿಕೂಲಕ್ರಮ, ಆದಿ ಪರ್ವ,15,2
 396.		ವಿವರಣ, ಬೇರೆಮಾಡುವುದು, ಆದಿ ಪರ್ವ,18,18
 397.		ವಿವಿಧವಿಭವ, ನಾನಾ ಬಗೆಯ ಆಡಂಬರ, ಉದ್ಯೋಗ ಪರ್ವ,7,20
 398.		ವಿವೇಕಶೂನ್ಯ, ವಿವೇಕವಿಲ್ಲದ, ಗದಾ ಪರ್ವ,10,11
 399.		ವಿಶಾಪ, ಶಾಪದಿಂದ ಮುಕ್ತಿ ಪಡೆಯುವುದು, ಅರಣ್ಯ ಪರ್ವ,14,12
 400.		ವಿಶಿಖ, ಬಾಣ., ಕರ್ಣ ಪರ್ವ,24,56
 401.		ವಿಶಿಖವ್ರಾತ, ಬಾಣ ಸಮೂಹ, ಭೀಷ್ಮ ಪರ್ವ,6,15
 402.		ವಿಶಿಷ್ಟ, ವಿಶೇಷ/ಶ್ರೇಷ್ಠ, ಉದ್ಯೋಗ ಪರ್ವ,4,71
 403.		ವಿಶುದ್ಧೆ, ಪವಿತ್ರಳು, ಆದಿ ಪರ್ವ,19,11
 404.		ವಿಶ್ರಮ, ಶ್ರಮ, ಗದಾ ಪರ್ವ,4,55
 405.		ವಿಶ್ರಮ, ಶ್ರಮವನ್ನು ನೀಗಲು, ಗದಾ ಪರ್ವ,9,1
 406.		ವಿಶ್ರಮವಿಲ್ಲ ನಿಮಿಷದಲಿ, ನಿವಿ, ಸಭಾ ಪರ್ವ,2,112
 407.		ವಿಶ್ರಮಿಸು, ವಿಶ್ರಾಂತಿ, ಆದಿ ಪರ್ವ,9,5
 408.		ವಿಶ್ವಂಭರ, ಜಗತ್ತನ್ನು ಕಾಪಾಡುವವ ಪರಮಾತ್ಮ (ಇಲ್ಲಿ, ಗದಾ ಪರ್ವ,5,7
 409.		ವಿಶ್ವಕರ್ಮ, ದೇವತೆಗಳ ಶಿಲ್ಪಿ, ಗದಾ ಪರ್ವ,11,36
 410.		ವಿಶ್ವರೂಪಿ, ಅನಂತರೂಪಿ, ಭೀಷ್ಮ ಪರ್ವ,3,86
 411.		ವಿಶ್ವವಿಕರ್ಣ, ವಿಶ್ವವಿಖ್ಯಾತ., ದ್ರೋಣ ಪರ್ವ,1,17
 412.		ವಿಶ್ವಾಮರ, ಜಗತ್ತಿನ ದೇವತೆ, ಕರ್ಣ ಪರ್ವ,6,21
 413.		ವಿಷಕನ್ನಿಕೆ, ತನ್ನ ಸ್ಪರ್ಶದಿಂದ ಇತರರಿಗೆ ಸಾವುಂಟುಮಾಡುವ ಹೆಂಗಸು, ಆದಿ ಪರ್ವ,5,17
 414.		ವಿಷದ್ರುಮ, ವಿಷವೃಕ್ಷ, ಶಲ್ಯ ಪರ್ವ,1,4
 415.		ವಿಷಧರಪತಿ, ವಿಷವನ್ನುಳ್ಳ ಸರ್ಪಗಳ ರಾಜ, ಗದಾ ಪರ್ವ,9,17
 416.		ವಿಷಮ, ವಿರೋಧ, ಗದಾ ಪರ್ವ,9,4
 417.		ವಿಷಮ, ಯುದ್ಧದಲ್ಲಿನ ವಿವಿಧ ಭಂಗಿಗಳು, ಗದಾ ಪರ್ವ,6,13
 418.		ವಿಷಮ, ಉಗ್ರ , ಭೀಷ್ಮ ಪರ್ವ,4,48
 419.		ವಿಷಮ, ಕಠಿಣ , ಗದಾ ಪರ್ವ,7,1, 
 420.		ವಿಷಮ, ತೀಕ್ಷ್ಣ, ದ್ರೋಣ ಪರ್ವ,5,25
 421.		ವಿಷಮಾವಗ್ರಹ, ?, ಸಭಾ ಪರ್ವ,16,52
 422.		ವಿಷಯಸ್ತೋಮ, ಶಬ್ದ, ಆದಿ ಪರ್ವ,16,35, , ,  ರಸ ,  ಗಂಧ ,  ವಿಷಯಗಳು, 
 423.		ವಿಷಾದಭರ, ಕೋಪಾವೇಶ, ಗದಾ ಪರ್ವ,7,27
 424.		ವಿಷಾದವಹ್ನಿ, ಕೋಪಾಗ್ನಿ, ಗದಾ ಪರ್ವ,13,6
 425.		ವಿಷ್ಠೆ, ಹೊಲಸು, ಉದ್ಯೋಗ ಪರ್ವ,4,93
 426.		ವಿಸಂಚಿಸಿ, ಪುಡಿಪುಡಿಮಾಡಿ, ಭೀಷ್ಮ ಪರ್ವ,8,28
 427.		ವಿಸಂಚಿಸು, ಪುಡಿ ಮಾಡು, ವಿರಾಟ ಪರ್ವ,8,58
 428.		ವಿಸಂಚಿಸು, ಕೇಡು, ಉದ್ಯೋಗ ಪರ್ವ,9,39
 429.		ವಿಸಂಚಿಸು, ತುಂಡಾಗು, ಶಲ್ಯ ಪರ್ವ,3,55
 430.		ವಿಸಂಚಿಸು, ಚೂರುಚೂರಾಗು, ವಿರಾಟ ಪರ್ವ,8,88
 431.		ವಿಸಂಧಿ, ಒಪ್ಪಂದ ಮುರಿಯುವಿಕೆ, ಕರ್ಣ ಪರ್ವ,14,16
 432.		ವಿಸಂಸ್ಥುಲ, ಸ್ಥಿರತೆಗೆಟ್ಟ, ಸಭಾ ಪರ್ವ,10,50
 433.		ವಿಸಟಂಬರಿವ, ಹರಡುವ/ಉಬ್ಬುವ, ಉದ್ಯೋಗ ಪರ್ವ,2,4
 434.		ವಿಸಟಂಬರಿದು, ಸುತ್ತಾಡಿ, ದ್ರೋಣ ಪರ್ವ,6,31
 435.		ವಿಸಟಂಬರಿಯನು, ಸುತ್ತಾಟವನ್ನು, ದ್ರೋಣ ಪರ್ವ,3,48
 436.		ವಿಸಟವರಿ, ವಿಸ್ತಾರವಾಗು, ಕರ್ಣ ಪರ್ವ,19,84
 437.		ವಿಸ್ತರಣ, ವಿವರಣೆ, ಆದಿ ಪರ್ವ,10,17
 438.		ವಿಸ್ತರದ, ಅಲಂಕೃತ, ಆದಿ ಪರ್ವ,1,3
 439.		ವಿಸ್ಫುಲಿಂಗ, ಬೆಂಕಿಯ ಕಿಡಿ, ಆದಿ ಪರ್ವ,20,42
 440.		ವಿಸ್ಫುಲಿಂಗ, ಕಿಡಿಗಳು, ಭೀಷ್ಮ ಪರ್ವ,6,28
 441.		ವಿಹಂಗತತಿ, ಹಕ್ಕಿಗಳ ಗುಂಪು, ಭೀಷ್ಮ ಪರ್ವ,4,84
 442.		ವಿಹಗಸಂತತಿ, ಪಕ್ಷಿ ಸಂಕುಲ, ಭೀಷ್ಮ ಪರ್ವ,4,16
 443.		ವಿಹರಣ, ವಿಹಾರ, ಆದಿ ಪರ್ವ,8,41
 444.		ವಿಹರಣ, ಚಲನವಲನ, ಸಭಾ ಪರ್ವ,1,38
 445.		ವಿಹಿತ, ಉಚಿತ, ಆದಿ ಪರ್ವ,16,14
 446.		ವಿಹಿತ, ಉಚಿತವಾದ, ಆದಿ ಪರ್ವ,10,3
 447.		ವಿಹೀನರಲಿ, ಬುದ್ಧಿಯಿಲ್ಲದವರಲ್ಲಿ, ಸಭಾ ಪರ್ವ,1,40
 448.		ವಿಹೃತಿ, ವಿಕಾರ, ಆದಿ ಪರ್ವ,15,19
 449.		ವಿಹ್ವಲ, ವ್ಯಾಕುಲ, ಶಲ್ಯ ಪರ್ವ,1,34
 450.		ವಿಹ್ವಿಲಿತ, ಗೊಂದಲಗೊಂಡ, ವಿರಾಟ ಪರ್ವ,8,82
 451.		ವಿಳಯರುದ್ರ, ಪ್ರಳಯಕಾಲದರುದ್ರ, ಗದಾ ಪರ್ವ,9,29
 452.		ವಿಳಯವಾರ್ತಾವ್ಯಾಳವಿಷ, ವಿನಾ±ವಾರ್ತೆಯೆಂಬ ಹಾವಿನ ವಿಷ, ಗದಾ ಪರ್ವ,11,1
 453.		ವಿಳಸಿತೆ, ಭೂಷಿತೆ, ಗದಾ ಪರ್ವ,11,57
 454.		ವಿಳಾಸವಳಿದಿದೆ, ಶೋಭೆ ಮಂಕಾಗಿದೆ, ವಿರಾಟ ಪರ್ವ,3,28
 455.		ವಿಳಾಸಿನೀಜನ, ಅರಮನೆಯ ಸುಂದರಿಯರು, ವಿರಾಟ ಪರ್ವ,10,19
 456.		ವೀಕ್ಷಿಸು, (ಸೂಕ್ಷ್ಮವಾಗಿ) ನೋಡು, ವಿರಾಟ ಪರ್ವ,6,15
 457.		ವೀಚುಗೆಡುವರು, ನಾಶವಾಗು, ಸಭಾ ಪರ್ವ,9,34
 458.		ವೀತರಾಗದ್ವೇóಷ, ರಾಗ, ಅರಣ್ಯ ಪರ್ವ,6,26
 459.		ವೀರ ಪೂತು, ಶಹಬ್ಬಾಸ್!, ಗದಾ ಪರ್ವ,2,30
 460.		ವೀರಪಣ, ವೀರಾವೇಶದ ಮಾತು, ಗದಾ ಪರ್ವ,10,25
 461.		ವೀರರಂಗ, ವೀರರ ರೀತಿ, ದ್ರೋಣ ಪರ್ವ,5,38
 462.		ವೀರರಸಾಬ್ಧಿ, ವೀರರಸದ ಸಮುದ್ರ, ಶಲ್ಯ ಪರ್ವ,1,25
 463.		ವೀರಸಿರಿ, ಶೌರ್ಯದ ಸಂಪತ್ತು, ಸಭಾ ಪರ್ವ,1,50
 464.		ವೀಸಬಡ್ಡಿ, ಒಂದು ವೀಸದಷ್ಟು ಪ್ರಮಾಣದ ಬಡ್ಡಿ, ವಿರಾಟ ಪರ್ವ,3,70
 465.		ವೀಳಯ, ಎಲೆ, ವಿರಾಟ ಪರ್ವ,3,83
 466.		ವೀಳೆಯ, ಆಹ್ವಾನ, ದ್ರೋಣ ಪರ್ವ,17,23
 467.		ವೀಳೆಯ, ತಾಂಬೂಲ, ಉದ್ಯೋಗ ಪರ್ವ,8,1
 468.		ವೀಳೆಯವ, ಒಪ್ಪಿಗೆಯನ್ನು, ಉದ್ಯೋಗ ಪರ್ವ,1,8
 469.		ವುಲಿ, ಹೇಳು/ಕೂಗು, ಉದ್ಯೋಗ ಪರ್ವ,11,38
 470.		ವೃಂದ, ಹಿಂಡು, ಉದ್ಯೋಗ ಪರ್ವ,3,101
 471.		ವೃಂದ, ಬಳಗ, ಉದ್ಯೋಗ ಪರ್ವ,5,2
 472.		ವೃಂದಾರಕ ವಧೂವರ್ಗ, ಅಪ್ಸರೆಯರ ಗುಂಪು, ಕರ್ಣ ಪರ್ವ,12,5
 473.		ವೃಕ, ತೋಳ, ಆದಿ ಪರ್ವ,9,9
 474.		ವೃಕೋದರ, ತೋಳದಂತಹ ಹೊಟ್ಟೆಯಿರುವವನು, ಶಲ್ಯ ಪರ್ವ,1,17
 475.		ವೃಕೋದರ, ತೋಳದಂತೆ ಹಸಿವುನ್ನುಳ್ಳವನು , ಗದಾ ಪರ್ವ,7,25
 476.		ವೃಕೋದರಸೂನು, ಭೀಮನ ಮಗ, ಸಭಾ ಪರ್ವ,1,6
 477.		ವೃತ್ತಿ, ಸ್ಥಿತಿ, ಆದಿ ಪರ್ವ,12,26
 478.		ವೃತ್ತಿ, ಇರುವಿಕೆಯ ರೀತಿ, ಆದಿ ಪರ್ವ,11,20
 479.		ವೃದ್ಧಿ, ಲಾಭ, ಉದ್ಯೋಗ ಪರ್ವ,9,67
 480.		ವೃಷಸೇನ, ಕರ್ಣನ ಮಗ, ಆದಿ ಪರ್ವ,13,57
 481.		ವೃಷಳು, ಶೂದ್ರಳು, ಉದ್ಯೋಗ ಪರ್ವ,4,48
 482.		ವೃಷ್ಟಿ, ಮಳೆ, ಉದ್ಯೋಗ ಪರ್ವ,4,114
 483.		ವೃಷ್ಟಿಬಿಂದು, ಮಳೆಯಹನಿ, ಉದ್ಯೋಗ ಪರ್ವ,4,52
 484.		ವೆಂಠಣಿಸಿ, ಬಳಸಿ, ಸಭಾ ಪರ್ವ,3,46
 485.		ವೆಂಠಣಿಸಿ, ಒಟ್ಟುಗೂಡಿಸಿ, ಭೀಷ್ಮ ಪರ್ವ,4,95
 486.		ವೆಂಠಣಿಸು, ಸ್ಥಾನವನ್ನು ಪಡೆ., ಭೀಷ್ಮ ಪರ್ವ,7,4
 487.		ವೆಂಠಣಿಸು, ಮುತ್ತು , ಗದಾ ಪರ್ವ,7,28, , ,  ಬಳಸು, 
 488.		ವೆಗ್ಗಳ, ಶ್ರೇಷ್ಠ , ಕರ್ಣ ಪರ್ವ,2,4
 489.		ವೆಗ್ಗಳ, ಹೆಚ್ಚಳ/ಅಧಿಕ, ಉದ್ಯೋಗ ಪರ್ವ,9,9
 490.		ವೆಗ್ಗಳಿಸು, ಹಿಗ್ಗು, ಕರ್ಣ ಪರ್ವ,12,3
 491.		ವೆಗ್ಗಳಿಸು, ಅಧಿಕವಾಗು, ವಿರಾಟ ಪರ್ವ,2,52
 492.		ವೆಗ್ಗಳೆ, ಹೆಚ್ಚುಗಾರಿಕೆ, ಗದಾ ಪರ್ವ,1,51
 493.		ವೆಗ್ಗಳೆಯ, ಶ್ರೇಷ್ಠರಾದ, ದ್ರೋಣ ಪರ್ವ,2,27
 494.		ವೆಗ್ಗಳೆಯ, ಹಿರಿತನದ , ಶಲ್ಯ ಪರ್ವ,3,26
 495.		ವೆಗ್ಗಳೆಯ, ಹೆಚ್ಚಿನ, ದ್ರೋಣ ಪರ್ವ,3,14
 496.		ವೆಗ್ಗಳೆಯವು, ಉತ್ತಮವಾದವು, ಅರಣ್ಯ ಪರ್ವ,14,38
 497.		ವೇಗಾಯ್ಲ, ವೇಗಶಾಲಿ, ವಿರಾಟ ಪರ್ವ,6,52
 498.		ವೇಗಾಯ್ಲ, ವೇಗವಾಗಿ ಸಾಗುವ, ವಿರಾಟ ಪರ್ವ,10,29
 499.		ವೇಗಾಯ್ಲ ರೇಖೆ, ತ್ವರಿತವಾಗಿ ಚಲಿಸುವ ಅಂದ ಚೆಂದ, ಆದಿ ಪರ್ವ,7,28
 500.		ವೇಗಾಯ್ಲತನ, ವೇಗಗಾರಿಕೆ, ಕರ್ಣ ಪರ್ವ,3,20
 501.		ವೇಡೆ, ಬೇಲಿ, ಅರಣ್ಯ ಪರ್ವ,8,31
 502.		ವೇಡೆಯವ, ಸುತ್ತುವರಿ, ಭೀಷ್ಮ ಪರ್ವ,3, 
 503.		ವೇಡೈಸಿ, ಸುತ್ತಮುತ್ತ, ಸಭಾ ಪರ್ವ,1,75
 504.		ವೇಢೆ, ಸುತ್ತುಗಟ್ಟು, ಗದಾ ಪರ್ವ,1,8
 505.		ವೇಢೆ, ಸುತ್ತು, ಆದಿ ಪರ್ವ,20,63
 506.		ವೇಢೆ, ಮುತ್ತಿಗೆ, ಶಲ್ಯ ಪರ್ವ,3,11
 507.		ವೇಢೆಯ, ಮುತ್ತಿಗೆ , ಶಲ್ಯ ಪರ್ವ,3,7
 508.		ವೇಢೈಸು, ಸುತ್ತುವರಿ, ಗದಾ ಪರ್ವ,5,3, , 
 509.		ವೇದಶಿರ, ಉಪನಿಷತ್ತು., ಆದಿ ಪರ್ವ,20,6
 510.		ವೇದಹೀನರು, ವೇದಗಳನ್ನು ತೊರೆದವರು, ಉದ್ಯೋಗ ಪರ್ವ,4,89
 511.		ವೇದಿ, ಯಜ್ಞಭೂಮಿ, ಆದಿ ಪರ್ವ,7,72
 512.		ವೇದಿ, ಕಟ್ಟೆ, ಆದಿ ಪರ್ವ,8,69
 513.		ವೇದಿ, ತಿಳಿದವ, ಉದ್ಯೋಗ ಪರ್ವ,3,45
 514.		ವೇಧೆ, ಉಪದ್ರವ, ಉದ್ಯೋಗ ಪರ್ವ,3,47
 515.		ವೇಲಾಯತರ, ಹೊಗಳು ಭಟ್ಟರ, ದ್ರೋಣ ಪರ್ವ,5,71
 516.		ವೇಲೆ, ಎಲ್ಲೆ , ಅರಣ್ಯ ಪರ್ವ,18,1, , 
 517.		ವೇಲೆ, ತೀರ, ಅರಣ್ಯ ಪರ್ವ,12,19
 518.		ವೇಶ್ಯೆ, ವಾರಾಂಗನೆ , ಆದಿ ಪರ್ವ,4,55, , 
 519.		ವೇಸಿ, ವೇಷಗಾರ, ಉದ್ಯೋಗ ಪರ್ವ,4,103
 520.		ವೇಸಿಯ, ವೇಶ್ಯೆ, ಉದ್ಯೋಗ ಪರ್ವ,3,80
 521.		ವೈಕಕ್ಷಕ, ಜನಿÀವಾರ, ಗದಾ ಪರ್ವ,9,17
 522.		ವೈಕುಂಠ, ವಿಷ್ಣು., ಉದ್ಯೋಗ ಪರ್ವ,9,61
 523.		ವೈಡೂರಿಯ, ವೈಡೂರ್ಯ, ಗದಾ ಪರ್ವ,4,15
 524.		ವೈತಾಳಿಕ, ಸ್ತುತಿಪಾಠಕ, ಉದ್ಯೋಗ ಪರ್ವ,11,35
 525.		ವೈತಾಳಿಕ, ರಾಜನನ್ನು ಎಚ್ಚರಿಸುವ ಮಂಗಳ ಪಾಠಕ, ಗದಾ ಪರ್ವ,2,16
 526.		ವೈದಿಕ, ವೇದಕ್ಕೆ ಸಂಬಂಧಿಸಿದುದು, ಆದಿ ಪರ್ವ,15,4
 527.		ವೈದಿಕಕ್ರಿಯೆ, ವೇದೋಕ್ತ ಕಾರ್ಯ, ಭೀಷ್ಮ ಪರ್ವ,8,3
 528.		ವೈದಿಕಧರ್ಮ, ವೇದಗಳಲ್ಲಿ ಹೇಳಿರುವ ಧರ್ಮ, ಗದಾ ಪರ್ವ,5,8
 529.		ವೈದಿಕವಿಧಾನ, ವೇದಗಳಲ್ಲಿ ತಿಳಿಸಿರುವ ಕ್ರಮಗಳು, ಗದಾ ಪರ್ವ,11,2
 530.		ವೈದಿಕೋಕ್ತಿ, ವೇದ ಘೋಷ, ವಿರಾಟ ಪರ್ವ,10,76
 531.		ವೈದೇಶಿಗರು, ಪರದೇಶಿಗಳು, ಆದಿ ಪರ್ವ,11,37
 532.		ವೈಧವ್ಯವಿಧಿ, ವಿಧವೆಯಾಗುವ ದುರ್ದೈವ, ಗದಾ ಪರ್ವ,8,2
 533.		ವೈನತೇಯ, ವಿನುತೆಯ ಮಗ , ಗದಾ ಪರ್ವ,10,6
 534.		ವೈಮನಸ್ಸು, ದ್ವೇಷ, ಗದಾ ಪರ್ವ,7,26
 535.		ವೈರ, ದ್ವೇಷ, ಆದಿ ಪರ್ವ,6,16
 536.		ವೈರಬಂಧ, ಗಟ್ಟಿಯಾದ ಶತ್ರುತ್ವ, ಗದಾ ಪರ್ವ,11,4
 537.		ವೈರಬಂಧ, ದ್ವೇಷ ಸಾಧನೆ, ಭೀಷ್ಮ ಪರ್ವ,9,42
 538.		ವೈರಬಂಧ, ದ್ವೇಷದ ಸಂಬಂಧ., ಗದಾ ಪರ್ವ,8,38
 539.		ವೈರಾಟ, ವಿರಾಟನ ಮಗ, ವಿರಾಟ ಪರ್ವ,8,26
 540.		ವೈರಿದಲ್ಲಣ, ಶತ್ರುಗಳನ್ನು ನಡುಗಿಸುವ (ಅರ್ಜುನ), ವಿರಾಟ ಪರ್ವ,6,53
 541.		ವೈರಿಭಟ ಸಂವರ್ತ, ಶತ್ರು ಸೈನಿಕರ ಪಾಲಿಗೆ ಬಿರುಗಾಳಿ (ಅರ್ಜುನ) ನೂತನ ಭೈರವ, ವಿರಾಟ ಪರ್ವ,5,0
 542.		ವೈರಿಮದವೇತಂಡ, ವೈರಿಯೆಂಬ ಮದಿಸಿದ ಆನೆ, ಗದಾ ಪರ್ವ,10,3
 543.		ವೈರಿವ್ರಾತ, ಶತ್ರುಸಮೂಹ, ವಿರಾಟ ಪರ್ವ,10,13
 544.		ವೈರೋತ್ಕರವಿಸಂಸ್ಥುಳ, ವೈರವನ್ನು ಹೆಚ್ಚಿಸಿ ಪರಸ್ಪರ ವಿನಾಶ ಮಾಡುವ, ಗದಾ ಪರ್ವ,11,73
 545.		ವೈವರ್ಣ, ಬಣ್ಣಗೆಟ್ಟಿತು, ಅರಣ್ಯ ಪರ್ವ,6,51
 546.		ವೈವಾಹ, ವಿವಾಹ ಸಂದರ್ಭ, ಉದ್ಯೋಗ ಪರ್ವ,3,136
 547.		ವೈಷ್ಣವ, ವಿಷ್ಣುವಿಗೆ ಸಂಬಂಧಿಸಿದ, ಗದಾ ಪರ್ವ,10,22
 548.		ವೈಹಾಳಿ, ಆನೆಯ ಸವಾರಿ, ಉದ್ಯೋಗ ಪರ್ವ,3,65
 549.		ವೈಹಾಳಿ, ಆನೆಕುದುರೆಗಳ ಏರಾಟ, ಸಭಾ ಪರ್ವ,12,25
 550.		ವೈಹಾಳಿ, ಕುದುರೆಯ ಮೇಲೆ ಕುಳಿತು ವಿಹಾರ, ಆದಿ ಪರ್ವ,20,11
 551.		ವ್ಯಗ್ರ, ಖಿನ್ನ, ವಿರಾಟ ಪರ್ವ,4,57
 552.		ವ್ಯತಿಕರ, ದುರ್ಘಟನೆ, ಗದಾ ಪರ್ವ,8,22
 553.		ವ್ಯಧಿಕರಣ, ವಿರುದ್ಧ ಮಾತು, ಆದಿ ಪರ್ವ,16,41
 554.		ವ್ಯಪಗತ, ಶತ್ರುಗಳನ್ನು ಹಿಮ್ಮೆಟ್ಟಿಸುವವನು., ಉದ್ಯೋಗ ಪರ್ವ,11,31
 555.		ವ್ಯಪಗಮನ, ನಾಶಹೊಂದಿದÀ, ಶಲ್ಯ ಪರ್ವ,1,34
 556.		ವ್ಯವಧಾನ, ಸಮಯಾವಕಾಶ, ಗದಾ ಪರ್ವ,8,10
 557.		ವ್ಯವಸಿತ, ವ್ಯವಸ್ಥೆ, ಗದಾ ಪರ್ವ,4,60
 558.		ವ್ಯವಹೃತಿ, ವ್ಯವಹಾರ, ಆದಿ ಪರ್ವ,17,18
 559.		ವ್ಯಸನ, ಚಟ, ಆದಿ ಪರ್ವ,4,13
 560.		ವ್ಯಾಕರಣ, ವಿಶ್ಲೇಷಣೆ, ಆದಿ ಪರ್ವ,12,18
 561.		ವ್ಯಾಕರಣ ಪಾಂಡಿತ್ಯ, ಒಂದು ವಿಷಯವನ್ನು ಸಂಪೂರ್ಣವಾಗಿ ತಿಳಿಯುವ ಬುದ್ಧಿವಂತಿಕೆ, ಗದಾ ಪರ್ವ,10,11
 562.		ವ್ಯಾಜ, ನೆಪ, ಸಭಾ ಪರ್ವ,10,1
 563.		ವ್ಯಾಧಿತ, ವ್ಯಾಧಿಗ್ರಸ್ಥ, ಗದಾ ಪರ್ವ,4,16
 564.		ವ್ಯಾಪಕ, ಪ್ರಸಾರಕ., ಗದಾ ಪರ್ವ,8,40
 565.		ವ್ಯಾಪಾದ, ದ್ರೋಹಚಿಂತನೆ, ಅರಣ್ಯ ಪರ್ವ,15,14
 566.		ವ್ಯಾಪ್ತಿ, ಪ್ರಭಾವ, ಆದಿ ಪರ್ವ,16,11
 567.		ವ್ಯಾಹೃತಿ, ಅಗ್ನಿಗೆ ಹವಿಸ್ಸನ್ನು ಕೊಡುವಾಗ, ಸಭಾ ಪರ್ವ,7,33
 568.		ವ್ಯಾಳ, ಸೊಕ್ಕಿದ ಆನೆ.  ಜಾಳಿಸು, ಗದಾ ಪರ್ವ,4,34
 569.		ವ್ಯಾಳ, ಹಾವು , ಆದಿ ಪರ್ವ,2,6
 570.		ವ್ಯೂಹ, ಕೈವಾಡ , ಅರಣ್ಯ ಪರ್ವ,15,19
 571.		ವ್ರಜ, ಗೋಕುಲ, ಅರಣ್ಯ ಪರ್ವ,17,3
 572.		ವ್ರಣ, ಗಾಯದಿಂ
 573.		ವ್ರಣ, ಗಾಯದಿಂದಾದ ಹುಣ್ಣು, ಗದಾ ಪರ್ವ,3,13
 574.		ವ್ರತಿ, ಯತಿ, ಆದಿ ಪರ್ವ,2,23
 575.		ಶಂಬರರು, ಶಂಬರಾಸುರನಂಥವರು, ಸಭಾ ಪರ್ವ,12,87
ಕುಮಾರವ್ಯಾಸ ಕೋಶ ಭಾರತ ಕಥಾಮಂಜರಿ- ಕುವೆಂಪು ಮತ್ತು ಮಾಸ್ತಿವೆಂಕಟೇಶ ಐಯಂಗಾರ್ ಸಂಪಾದಿತ. ಇಂದ:ಮೈಸೂರು ಸಂಸ್ಥಾನದ ಸಾಹಿತ್ಯ ಮತ್ತು ಸಂಸ್ಖರತಿ ಇಲಾಖೆ.ಸಿರಿಗನ್ನಡ ಅರ್ಥಕೋಶ

ನೋಡಿ
ಕುಮಾರವ್ಯಾಸ ಭಾರತ
ಗದುಗಿನ ಭಾರತ ಪದಕೋಶ
ಪರಿವಿಡಿ

ಉಲ್ಲೇಖ
ವರ್ಗ:ಕನ್ನಡ ಸಾಹಿತ್ಯ